ಬಂಧುಗಳೆ,
ಆರ್ ಎಲ್ ಜಾಲಪ್ಪ ಅಕಾಡೆಮಿಯು ಶ್ರೀ ಜೆ ಪಿ ನಾರಾಯಣಸ್ವಾಮಿ ಪ್ರತಿಷ್ಠಾನ ಮತ್ತು ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಸಹಯೋಗದಲ್ಲಿ ಏಪ್ರಿಲ್ 27 ಮತ್ತು 28 ರಂದು ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಮಾದರಿ ಸಂದರ್ಶನ ನಡೆಸಿತು. ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ವ್ಯಕ್ತಿ ಸಾಮರ್ಥ್ಯ ಪರೀಕ್ಷೆಯ ಸಂದರ್ಶನದಂತೆಯೇ ಈ ಮಾದರಿ ಸಂದರ್ಶನಗಳನ್ನು (Mock Interview) ಎರಡು ದಿನಗಳ ಕಾಲ ನಡೆಸಲಾಯಿತು.
ಐಎಎಸ್, ಐಎಫ್ ಎಸ್ ಹುದ್ದೆಗಳಲ್ಲಿ ಇರುವವರು, ಸರ್ಕಾರಿದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದವರು, ಶಿಕ್ಷಣ ತಜ್ಞರು, ಹಿರಿಯ ಉಪನ್ಯಾಸಕರು ಸಂದರ್ಶಕರಾಗಿ ಭಾಗವಹಿಸಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ನಮ್ಮ ಸಮಾಜದ ಸುಮಾರು ಇಪ್ಪತ್ತು ಅಭ್ಯರ್ಥಿಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಈ ಮಾದರಿ ಸಂದರ್ಶನದ ಪ್ರಯೋಜನ ಪಡೆದರು.
ಈ ಸಂದರ್ಶನದಿಂದ ಕೆಪಿಎಸ್ ಸಿ ಇಂಟರ್ ವ್ಯೂ ಎದುರಿಸಲು ನಮಗೆ ಧೈರ್ಯ ಬಂದಿದೆ. ನಮ್ಮ ಲೋಪಗಳ ಅರಿವಾಗಿದೆ. ನಮ್ಮ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು ನೆರವಾಗಿದೆ ಎಂದು ಅಭ್ಯರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎರಡೂ ದಿನಗಳ ಊಟ ಉಪಚಾರದ ಹೊಣೆಯನ್ನು ವಹಿಸಿಕೊಂಡ ಶ್ರೀ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನದ ಔದಾರ್ಯಕ್ಕೆ ಜಾಲಪ್ಪ ಅಕಾಡೆಮಿಯ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ. Mock interview ಸಂದರ್ಭದ ಕೆಲವು ಚಿತ್ರಗಳು ಇಲ್ಲಿವೆ.
2016 ನೇ ಸಾಲಿನಲ್ಲಿ ರಾಮನಗರ ಜಿಲ್ಲೆ, ಸೋಲೂರಿನ ಆರ್.ಎಲ್.ಜಾಲಪ್ಪ ಅಕಾಡೆಮಿಯಲ್ಲಿ ಕೆಲವು ಸಮಯ ಕಳೆದಿರುತ್ತೇನೆ. ಅಲ್ಲಿ ಓದಲು ಬೇಕಾದ ಎಲ್ಲಾ ರೀತಿಯ ವಾತಾವರಣ ಇರುತ್ತದೆ. ಆಟದ ಮೈದಾನ ಇದೆ, ಸ್ಟಡಿ ಹಾಲ್ ಸಹ ಇದ್ದು ಸರ್ಕಾರಿ ಸೇವೆ ಬಯಸುವ ಎಲ್ಲಾ ಬಡವಿದ್ಯಾರ್ಥಿಗಳಿಗೆ, ತುಂಬಾ ಸಹಕಾರಿ ಆಗುವ ಎಲ್ಲಾ ಸೌಕರ್ಯಗಳು ದೊರಕುತ್ತವೆ. ನಾನು ಅವುಗಳನ್ನು ಪಡೆದುಕೊಂಡು ಈ ಎತ್ತರಕ್ಕೆ ಬೆಳೆದಿರುತ್ತೇನೆ. ತಾವುಗಳು ಸೌಕರ್ಯ ಬಳಸಿಕೊಂಡು ಜೀವನದಲ್ಲಿ ಮುಂದೆ ಬನ್ನಿ ಎಂದು ಹಾರೈಸುತ್ತೇನೆ.
ಗಿರೀಶ್ ಕೆ.ಎನ್. - ಸೊರಬ (ಕೆ.ಎ.ಎಸ್. ಅಧಿಕಾರಿ- ೨೦೧೭ ನೇ ಬ್ಯಾಚ್)
ದಾವಣಗೆರೆ ಜಿಲ್ಲಾ ಉದ್ಯೋಗಾಧಿಕಾರಿ
೨೦೧೯-೨೦ ರಲ್ಲಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆಯಾಗಿರುತ್ತೇನೆ. ಬೆಂಗಳೂರು ಸೆಂಟ್ರಲ್ ಅಲ್ಲಿ ಪ್ರೊಬೆಷನರಿ ಪಿ.ಎಸ್.ಐ. ಆಗಿ ಕರ್ತವ್ಯ \ನಿರ್ವಹಿಸುತ್ತಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧರಾಗಿರುವವರಿಗೆ ಉತ್ತಮ ತರಬೇತಿ ಮುಖ್ಯವಾಗಿದ್ದು, ತರಬೇತಿ ಗುರಿತಲುಪಲು ಒಂದು ಮಾರ್ಗವಾಗಿದೆ. ಜೊತೆಗೆ ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ಬಹಳ ವೇಗವಾಗಿ ನಮ್ಮ ಗುರಿ ತಲುಪಬಹುದು. ನಾನು ಮತ್ತು ನನ್ನ ಸಹೋದರಿ ಇಬ್ಬರೂ ಸಹ ಆರ್.ಎಲ್.ಜಾಲಪ್ಪ ಅಕಾಡೆಮಿಯಲ್ಲಿ ೪ ತಿಂಗಳ ತರಬೇತಿ ಪಡೆದು ಪಿ.ಎಸ್.ಐ. ಆಗಿ ನೇಮಕವಾಗಿದ್ದೇವೆ. ಅಕಾಡೆಮಿಯಲ್ಲಿ ಊಟ, ವಸತಿ ತುಂಬಾ ಚೆನ್ನಾಗಿದೆ, ಹಾಗೂ ಗ್ರಂಥಾಲಯ ವ್ಯವಸ್ಥೆ ಚೆನ್ನಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಸುರಕ್ಷತೆ ಇದೆ. ಹಾಗೂ ಒಳ್ಳೆ ಒಳ್ಳೆಯ ಉಪನ್ಯಾಸಕರಿಂದ ತರಬೇತಿ ಕೊಡಿಸಲಾಗುತ್ತದೆ. ಅಕಾಡೆಮಿಯ ಸಿಬ್ಬಂಧಿಗಳು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಯಾವ ರೀತಿ ಓದಬೇಕು ಎಂಬುದನ್ನು ಚೆನ್ನಾಗಿ ತಿಳಿಸಿಕೊಡುತ್ತಾರೆ. ಇಂತಹ ಅಕಾಡೆಮಿಯಲ್ಲಿ ತರಬೇತಿ ಪಡೆಯಬೇಕು ಮತ್ತು ನಿರಂತರ ಅಭ್ಯಾಸ ಮಾಡಬೇಕು ಮತ್ತು ಗುರಿ ಸಾಧಿಸಬೇಕು ಎಂದು ಹಾರೈಸುತ್ತೇನೆ.
ಮಧು & ಮಮತ - ಸಾಗರ
ಪಿ.ಎಸ್.ಐ -೨೦೧೮ ನೇ ಬ್ಯಾಚ್